ಬೇಕಾಗುವ ಪದಾರ್ಥಗಳು:
 • ಮೊಳಕೆ ಬರಿಸಿದ ಹೆಸರುಕಾಳು-ಕಾಲು ಕೆಜಿ
 • ಈರುಳ್ಳಿ-೨, ಸಣ್ಣಗೆ ಹೆಚ್ಚಿದ್ದು
 • ತೆಂಗಿನ ತುರಿ-೧/೨ ಹೋಳು
 • ಕೆಂಪು ಮೆಣಸಿನಕಾಯಿ-೪-೫ (ಹುರಿದುಕೊಳ್ಳಿ)
 • ಕೊತ್ತಂಬರಿ ಬೀಜ-೧ ಟೀ ಚಮಚ (ಹುರಿದುಕೊಳ್ಳಿ)
 • ಜೀರಿಗೆ-೧/೨ ಟೀ ಚಮಚ (ಹುರಿದುಕೊಳ್ಳಿ)
 • ಟೊಮ್ಯಾಟೋ-೧ ಮಧ್ಯಮ ಗಾತ್ರದ್ದು
 • ಕರಿಬೇವು-೨ ಎಳೆ
 • ಸಾಸಿವೆ-೧/೪ ಟೀ ಚಮಚ
 • ಉಪ್ಪು-ರುಚಿಗೆ
 • ಎಣ್ಣೆ-ಒಗ್ಗರಣೆಗೆ

 

 

 

 
 

 

ಬಗೆ-೧
ಪದಂಜಿ/ಮೊಳಕೆ ಹೆಸರುಕಾಳು ಗಸಿ
 
 
 

ವಿಧಾನ:

 • ದಪ್ಪತಳದ ಪಾತ್ರೆಯನ್ನು ಒಲೆಯ ಮೇಲಿಟ್ಟು ಎರಡು ಟೀ ಚಮಚ ಎಣ್ಣೆ ಹಾಕಿ, ಎಣ್ಣೆ ಕಾದ ಮೇಲೆ ಅದಕ್ಕೆ ಹೆಚ್ಚಿಟ್ಟುಕೊಂಡಿರುವುದರಲ್ಲಿ ಅರ್ಧ ಈರುಳ್ಳಿ, ಮೊಳಕೆ ಬರಿಸಿದ ಹೆಸರು ಕಾಳನ್ನು ಹಾಕಿ ೨ ನಿಮಿಷ ಹುರಿದು, ೧ ಕಪ್ ನೀರು ಹಾಕಿ ಅದನ್ನು ಬೇಯಲು ಬಿಡಿ.
 • ತೆಂಗಿನ ತುರಿ, ಕೆಂಪುಮೆಣಸಿನಕಾಯಿ, ಧನಿಯಾ, ಜೀರಿಗೆ, ಟೊಮ್ಯಾಟೋ, ಉಪ್ಪು ಇವನ್ನು ಸಣ್ನದಾಗಿ ರುಬ್ಬಿಕೊಳ್ಳಿ
 • ಒಲೆಯ ಮೇಲೆ ಬೇಯುತ್ತಿರುವ ಮೊಳಕೆ ಹೆಸರುಕಾಳಿಗೆ ಈ ಮಸಾಲೆಯನ್ನು ಸೇರಿಸಿ, ಸ್ವಲ್ಪ ನೀರು ಸೇರಿಸಿ, ೧೦ -೧೫ ನಿಮಿಷ ಕುದಿಸಿ.
 • ಇದು ಕುದಿಯುತ್ತಿರುವಂತೆಯೇ, ಇನ್ನೊಂದು ಒಲೆಯ ಮೇಲೆ ಬಾಣಲಿಯನ್ನು ಇಟ್ಟು, ೧ ಟೀ ಚಮಚ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಉಳಿದ ಈರುಳ್ಳಿ, ಕರಿಬೇವು ಹಾಕಿ ಒಗ್ಗರಣೆ ಕೊಟ್ಟು ಕುದಿಯುತ್ತಿರುವ ಗಸಿಗೆ ಸೇರಿಸಿ.
 • ಉಪ್ಪಿನ ಹದ ನೋಡಿಕೊಂಡು, ಮಸಾಲೆಯ ಚನ್ನಾಗಿ ಬೆಂದಾಗ ಗಸಿಯನ್ನು ತೆಗೆದಿಡಿ.
 • ಇದನ್ನು, ಗಂಜಿ, ಅನ್ನ, ಮುದ್ದೆ, ಚಪಾತಿಗಳ ಜೊತೆ ಬಳಸಿ.

 

ಬಗೆ ೨
ವಿಶ್ವದೆಲ್ಲೆಡೆಯ ಅಡುಗೆ-ತಿನಿಸುಗಳ ಹಾಗೂ ನಮ್ಮ ನಿಮ್ಮ ಪಾಕ ಪ್ರಯೋಗ ಶಾಲೆಗಳಲ್ಲಿ ಹುಟ್ಟುವ ಹೊಸ ರುಚಿಗಳ ವಿನಿಮಯ.
 
 ಬೇಕಾಗುವ ಪದಾರ್ಥಗಳು:

  (ಒಂದು ಲೋಫ್ ಅಥವಾ ಒಂದು ಪ್ಯಾನ್ ಬ್ರೆಡ್ ಮಾಡಲು)

  • ಮಿಶ್ರ ಒಣ ಹಣ್ಣುಗಳು: ಒಂದು ಕಪ್ (ಮಾವು, ಚೆರ್ರಿ, ದ್ರಾಕ್ಷಿ, ಏಪ್ರಿಕಾಟ್, ಪ್ಲಮ್, ಕ್ರ್ಯಾನ್ ಬೆರ್ರಿ ಇತ್ಯಾದಿ)
  • ಮಿಶ್ರ ಒಣ ಬೀಜಗಳು: ಒಂದುವರೆ ಕಪ್ (ಬಾದಾಮಿ, ಆಕ್ರೋಟ್/ವಾಲ್ನಟ್, ಕುಂಬಳ ಬೀಜ ಇತ್ಯಾದಿ)
  • ಹಣ್ಣಿನ ರಸ: ಒಂದುವರೆ ಕಪ್ (ಮಾವು, ಕಿತ್ತಳೆ ಅಥವಾ ಪೈನಾಪಲ್ ಜ್ಯೂಸ್-ಫ್ರೆಶ್ಶಾಗಿ ಮಾಡಿದ್ದು)
  • ಹಾಲು: ೧ ಕಪ್
  • ಬೆಣ್ಣೆ: ೪ ಚಮಚ (ಸ್ವಲ್ಪ ಕರಗಿದ್ದು)
  • ಬೆಲ್ಲದ ಪುಡಿ ಅಥವಾ ಬ್ರೌನ್ ಶುಗರ್: ಒಂದು ಕಪ್ (ಕಪ್ ಗೆ ಗಟ್ಟಿಯಾಗಿ ತುಂಬಿಸಿ)
  • ನಿಂಬೆಹಣ್ಣು-ಒಂದು (ಇದರ ರಸ ಮತ್ತು ಸಿಪ್ಪೆ ತುರಿದು ಪ್ರತ್ಯೇಕವಾಗಿ ತೆಗೆದಿಟ್ಟುಕೊಳ್ಳಿ)
  • ಮೊಟ್ಟೆ-೧
  • ಗೋಧಿ ಹಿಟ್ಟು: ಒಂದೂಮುಕ್ಕಾಲು ಕಪ್
  • ಬೇಕಿಂಗ್ ಸೋಡಾ: ಒಂದುವರೆ ಟೀ ಚಮಚ
  • ಬೇಕಿಂಗ್ ಪೌಡರ್: ಅರ್ಧ ಟೀ ಚಮಚ
  • ಉಪ್ಪು: ಎರಡು ಚಿಟಿಕೆ

   

   

   

   

   

   
   
   

   

   

  ಗೋಧಿ ಹಿಟ್ಟಿನ ಒಣಹಣ್ಣು-ಬೀಜಗಳ ಸಿಹಿ ಬ್ರೆಡ್
   
   
  ವಿಧಾನ:
  • ಒಂದು ಬಟ್ಟಲಿನಲ್ಲಿ ಎಲ್ಲ ಒಣ ಹಣ್ಣುಗಳನ್ನು ಹಾಕಿ ಅದರ ಮೇಲೆ ಹಣ್ಣಿನ ರಸವನ್ನು ಸುರಿದು ಇದನ್ನು ಒಂದು ಗಂಟೆ ನೆನೆಯಲು ಬಿಡಿ. ನಂತರ ನೆನೆಸಿಟ್ಟ ಒಣಹಣ್ಣುಗಳನ್ನು ಸೋಸಿ ತೆಗೆದಿಡಿ, ಹಣ್ಣಿನ ರಸವನ್ನು ಪ್ರತ್ಯೇಕವಾಗಿಟ್ಟುಕೊಳ್ಳಿ.
  • ಮತ್ತೊಂದು ಬಟ್ಟಲಿನಲ್ಲಿ ಗೋಧಿಹಿಟ್ಟು, ಬೇಕಿಂಗ್ ಸೋಡಾ, ಬೇಕಿಂಗ್ ಪೌಡರ್, ಉಪ್ಪು ಇವನ್ನು ಚನ್ನಾಗಿ ಗಂಟಿಲ್ಲದಂತೆ ಬೆರೆಸಿ.
  • ಇನ್ನೊಂದು ದೊಡ್ಡ ಬಟ್ಟಲಿನಲ್ಲಿ ಮೊಟ್ಟೆಯನ್ನು ಒಡೆದುಕೊಂಡು ಫೋರ್ಕಿನ ಸಹಾಯದಿಂದ ಅದನ್ನು ಸ್ವಲ್ಪವೇ ಬೀಟ್ ಮಾಡಿ. ಇದಕ್ಕೆ ಬೆಲ್ಲ ಅಥವಾ ಬ್ರೌನ್ ಶುಗರ್ ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ಮತ್ತು ನಿಂಬೆಹುಳಿಯನ್ನು ಸೇರಿಸಿ.
  • ಈ ಮೊಟ್ಟೆ-ಸಕ್ಕರೆ ಮಿಶ್ರಣಕ್ಕೆ ಹಣ್ಣಿನ ರಸ ಮತ್ತು ನಿಂಬೆಯ ತುರಿದ ಸಿಪ್ಪೆಯನ್ನು ಸೇರಿಸಿ ಬೆರೆಸಿಕೊಳ್ಳಿ.
  • ಇಷ್ಟರಲ್ಲಿ ಅವನ್ ಅನ್ನು ೩೫೦ ಡಿಗ್ರಿ ಫ್ಯಾರನೈಟ್ ಗೆ ಪ್ರಿ-ಹೀಟ್ ಮಾಡಲು ಇಡಿ. 
  • ಈಗ, ಮೊಟ್ಟೆಯ ಮಿಶ್ರಣವಿರುವ ದೊಡ್ಡ ಬಟ್ಟಲಿಗೆ, ಗೋಧಿಹಿಟ್ಟು ಇತ್ಯಾದಿಗಳ ಮಿಶ್ರಣವನ್ನು ನಿಧಾನಕ್ಕೆ ಹಾಕುತ್ತಾ, ಮರದ ಸೌಟಿನಿಂದ ತಿರುಗಿಸುತ್ತಾ ಬನ್ನಿ. ಇದಕ್ಕೆ ನೆನೆಸಿಟ್ಟ ಒಣ ಹಣ್ಣುಗಳು ಮತ್ತು ಬೀಜಗಳನ್ನು ಮಿಶ್ರ ಮಾಡಿ ಮತ್ತಷ್ಟು ತಿರುಗಿಸಿ. ಬೆಣ್ಣೆಯನ್ನು ಸೇರಿಸಿ. ಮಿಶ್ರಣ ಗಟ್ಟಿಯಾಗದಂತೆ ನಿಧಾನಕ್ಕೆ ಹಾಲನ್ನು ಸೇರಿಸಿಕೊಳ್ಳುತ್ತಾ ಬೆರೆಸುತ್ತಾ ಬನ್ನಿ.
  • ಈ ಮಿಶ್ರಣ ರವೆಇಡ್ಲಿ ಹಿಟ್ಟಿನ ಹದಕ್ಕಿಂತ ತೆಳ್ಳಗಾಗಬಾರದು. 
  • ಬೇಕ್ ಮಾಡಬಹುದಾದಂತಹ ಲೋಫ್ ಪ್ಯಾನ್ ಅಥವಾ ಕೇಕ್ ಪ್ಯಾನ್ ಒಂದಕ್ಕೆ ಎಣ್ಣೆಯನ್ನು ಹಚ್ಚಿ ಅಥವಾ ವ್ಯಾಕ್ಸ್ ಪೇಪರ್ ಬಳಸಿ, ಮಿಶ್ರಣವನ್ನು ಅದಕ್ಕೆ ಸುರುವಿಕೊಳ್ಳಿ.
  • ಪ್ಯಾನ್ ಅನ್ನು ಅವನ್ ಒಳಗಿಟ್ಟು ೪೦ ರಿಂದ ೪೫ ನಿಮಿಷ ಬೇಕ್ ಮಾಡಿ. ಇದನ್ನು ಹೊರಗೆ ತೆಗೆಯುವ ಮುನ್ನ ಫೋರ್ಕ್ ಅಥವಾ ಟೂತ್ ಪಿಕ್ ಅನ್ನು ಚುಚ್ಚಿ  ನೋಡಿ. ಮಿಶ್ರಣ ಅವಕ್ಕೆ ಅಂಟಿಕೊಂಡಿಲ್ಲವೆಂದಲ್ಲಿ ಬ್ರೆಡ್ ಬೆಂದಿದೆ ಎಂದರ್ಥ.
  • ಪ್ಯಾನ್ ಅನ್ನು ಹೊರಕ್ಕೆ ತೆಗೆದು ಸ್ವಲ್ಪ ಬೆಣ್ಣೆಯನ್ನು ಬ್ರೆಡ್ ನ ಮೇಲ್ಮೈಗೆ ಸವರಿ (ಆಗ ಅದು ಒರಟಾಗುವುದಿಲ್ಲ).
  • ೧೫-೨೦ ನಿಮಿಷ ಆರಲು ಬಿಡಿ.
  • ಇದನ್ನು ಸಿಹಿ ಬ್ರೆಡ್ ನಂತೆ ಬೆಣ್ಣೆಯೊಟ್ಟಿಗೆ ಅಥವಾ ಹಣ್ಣಿನ ಕೇಕ್ ಆಗಿಯೂ ತಿನ್ನಬಹುದು.
   
   
   
   
   
  Copyright © 2011 Neemgrove Media
  All Rights Reserved