ಈ ಬಾರಿ ಆಯಾಮ ತಡವಾಗಿ ತೆರೆ ಕಾಣುತ್ತಿದೆ. ಒಂದಷ್ಟು ಕಲಿಕೆ,
ಹೆಕ್ಕುವಿಕೆ, ಒಂಚೂರು ರಿಪೇರಿ, ಒಂದಷ್ಟು ಪರ್ಯಟನೆ, ಒಂದು ಅನಾವರಣ...ಇವು ಈಗ ಆಯಾಮ
ಪರಿವಾರದ ಮುಂದಿರುವ ಅಸೈನ್ಮೆಂಟ್ ಗಳು.
ಅಸೈನ್ಮೆಂಟ್ಗಳ ತರಾತುರಿ, ಗಡಿಬಿಡಿಯಿಂದಾಗಿ ನಿಮ್ಮ ಜೊತೆ ಕನಸು, ಕಲಿಕೆ,
ಕಥೆ ಹಂಚಿಕೊಳ್ಳುತ್ತಾ ಕಳೆದುಹೋಗುತ್ತಿದುದಕ್ಕೆ ಸ್ವಲ್ಪ ಬ್ರೇಕ್!
ಆಯಾಮಕ್ಕೆ ಮತ್ತಷ್ಟು ಬಣ್ಣ, ರೆಕ್ಕೆ ಪುಕ್ಕ ಸಿಕ್ಕಿಸಿಕೊಂಡು, ಸ್ವಲ್ಪ ಕೋಶ ತುಂಬಿಕೊಂಡು, ಸಧ್ಯದಲ್ಲೇ ನಿಮ್ಮ ಮುಂದೆ
ಬರುವವರೆಗು ಸಣ್ಣದೊಂದು ಸೆಬಾಟಿಕಲ್ ರಜ ಹಾಕುತ್ತಿದ್ದೇವೆ. ಇದು ಸ್ವಲ್ಪ ಕಾಲ ಮಾತ್ರ.
ಸಿಕ್ಕಿದ್ದನ್ನು, ಅನರ್ಘ್ಯವಾದದ್ದನ್ನು ಸದಾ ನಿಮ್ಮ ಜೊತೆ ಹಂಚಿಕೊಳ್ಳುವ ಹಂಬಲ ನಮ್ಮದು.
ನಮ್ಮ ಕಟ್ಟುವಿಕೆ, ಕಲಿಕೆ, ಪರ್ಯಟನೆಯಲ್ಲಿ ನೀವು ಜೊತೆಗಿರುತ್ತೀರಲ್ಲವೇ...